August 8, 2026

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಔರಾದ:-ಕಲೆಯನ್ನು ಕರಗತ ಮಾಡಿಕೊಂಡು ತನ್ನ ಚಿತ್ರಕಲೆಯ ಮುಖಾಂತರ ಅದರಲ್ಲಿನ ಭಾವನೆಗಳನ್ನು ಪರರಿಗೆ ಧಾರೆಯೆರೆಯುವವನೇ ನಿಜವಾದ ಕಲಾವಿದನಾಗಿ ಹೊರಹೊಮ್ಮುತ್ತಾನೆ ಎಂದು ಕರ್ನಾಟಕ ಪಬ್ಲಿಕ್ ಸಂಸ್ಥೆ ಕಾರ್ಯದರ್ಶಿ ನಂದಾದೀಪ ಬೋರಾಳೆ ಹೇಳಿದರು. ತಾಲೂಕಿನ ಸಂತಪುರ ಶುಭಾಶ್ಚಂದ್ರ ಭೋಸ್ ಪ್ರೌಢಶಾಲೆಯಲ್ಲಿ ಶನಿವಾರ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದ ಕಲಾವಿದ ಪ್ರಭು ಎಸ್. ವಾಸುದೇವ ಗರಡಿಯಲ್ಲಿ ಜರುಗಿದ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಶೆಂಬೆಳ್ಳಿಯ ಬಡ ಕುಟುಂಬದ ಯುವಕ ಪ್ರಭು ಎಸ್. ವಾಸುದೇವ ಅವರು ತನ್ನ ಸಹಸ್ರಾರು ಕಲಾಕೃತಿಗಳ ಮೂಲಕ ಉತ್ತಮ ಕಲಾವಿದನಾಗಿ ಸಮಾಜದಲ್ಲಿ ಅನೇಕ ಜಾಗೃತಿ ಮೂಡಿಸುವಂತಹ ಕಲೆ ಚಿತ್ರಗಳನ್ನು ತನ್ನ ಸ್ವಂತ ಕೈಚಳಕದಿಂದ ಮೂಡಿಸಿ, ಅನೇಕ ಯುವ ಪ್ರತಿಭೆಗಳಿಗೆ ಗುರುವಾಗಿ ಹೊರಹೊಮ್ಮಿದ್ದು, ಇಂತಹ ಮಹಾನ್ ಕಲವಾದರಿಗೆ ಎಲ್ಲರು ಪ್ರೋತ್ಸಾಹಿಸಿ ಅಳಿವಿನಂಚಿನಲ್ಲಿರುವ ಕಲೆ ಮತ್ತು ಕಲಾವಿದರನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

 

ಮುಖ್ಯಗುರು ಮನೋಹರ ಬಿರಾದರ್ ಮಾತನಾಡಿ, ವಾಸುದೇವ ಕಲಾಕೃತಿಗಳಲ್ಲಿ ತಂತ್ರಗಾರಿಕೆಗೆ ಮಹತ್ವ ನೀಡಿದ್ದಾರೆ. ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅವರ ಕಲಾಕೃತಿಗಳಿಂದ ಉಪಯುಕ್ತ ಮಾಹಿತಿ ಸಿಕ್ಕಂತಾಗಿದೆ ಎಂದು ಹೇಳಿದರು.

 

  1.  ಗಣಪತಿ ವಾಸುದೇವ, ಸತೀಷ ನಾಗೂರೆ ಸೇರಿದಂತೆ ಇನ್ನಿತರರಿದ್ದರು.ಶಿಕ್ಷಕಿ ಸಂಗೀತಾ ಹೊಸಖಂಡೆ ಸ್ವಾಗತಿಸಿದರು. ರಾಜಶೇಖರ ಕುಶನೂರೆ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771